ಮನೆಯ ಗೋಡೆಗಳ ಮೇಲೆ ಹೆಚ್ಚು ಚಿಕ್ಕ ಮಕ್ಕಳು ಕಲೆ ಮಾಡುತ್ತಾರೆ. ಆದರೆ ಗೋಡೆಗಳು ಕಲೆಗಳಾದಾಗ ಸುಲಭವಾಗಿ ನಾವೇ ಸ್ವಚ್ಛಗೊಳಿಸಿಕೊಳ್ಳಬಹುದಾದ ಹಲವು ಮಾರ್ಗಗಳಿವೆ. ಯಾವೆಲ್ಲಾ ವಿಧಾನಗಳ ಮೂಲಕ ಗೋಡೆಯ ಕಲೆಯನ್ನು ಸ್ವಚ್ಛಗೊಳಿಸಬಹುದು ಎಂದು ಮುಂದೆ ನೋಡೋಣ:
ನೀರಿನಲ್ಲಿ ನೆನೆಸಿದ ಡ್ರೈಯರ್ ಶೀಟ್
ಗೋಡೆಯ ಕಲೆಯನ್ನು ತೆಗೆಯಲು ಕೆಲವರು ಡ್ರೈಯರ್ ಶೀಟ್ನಿಂದ ಉಜ್ಜುತ್ತಾರೆ. ಆದರೆ ಇದರಿಂದ ಯಾವುದೇ ಉಪಯೋಗವಿಲ್ಲ ಬದಲಾಗಿ ಗೋಡೆಯ ಬಣ್ಣ ಸಹ ಹಾಳಾಗಬಹುದು. ಇದಕ್ಕೆ ಪರ್ಯಾಯವಾಗಿ ಡ್ರೈಯರ್ ಶೀಟ್ ಅನ್ನು ನೀರಿನಲ್ಲಿ ಅದ್ದಿ ನಂತರ ಅದನ್ನು ಗೋಡೆಯ ಮೇಲೆ ಸ್ಕ್ರಬ್ ಮಾಡಿದರೆ ಕಲೆ ನಿಧಾನವಾಗಿ ಮಾಯವಾಗುತ್ತದೆ. ಅಲ್ಲದೇ ಡ್ರೈಯರ್ ಶೀಟ್ಗಳು ಕಡಿಮೆ ಬೆಲೆಗೆ ಲಭ್ಯವಿದ್ದು, ಯಾವುದೇ ರಾಸಾಯನಿಕಗಳಿಂದ ಮುಕ್ತವಾಗಿವೆ.
ವಿನಿಗರ್
ವಿನೆಗರ್ ಮತ್ತು ಹಲ್ಲುಜ್ಜುವ ಬ್ರಶ್ನಿಂದ ಸುಲಭವಾಗಿ ಗೋಡೆಗಳ ಗುರುತುಗಳನ್ನು ಸ್ವಚ್ಛಗೊಳಿಸಬಹುದು. ಅದರಲ್ಲೂ ಗೋಡೆಯ ಮೇಲೆ ಮಕ್ಕಳು ಮಾಡುವ ಕ್ರಯಾನ್ ಕಲೆಯನ್ನು ಈ ವಿಧಾನದಿಂದ ಶೀಘ್ರವೇ ಸ್ವಚ್ಛಗೊಳಿಸಬಹುದು. ಅಲ್ಲದೇ ವಿನೆಗರ್ ಬಳಕೆಯಿಂದ ಕೀಟಾಣುಗಳ ನಾಶ ಸಹ ಆಗುತ್ತದೆ.
ಬೇಸಿಕ್ ಎಚ್ 2
ಡಿಗ್ರೀಸರ್ ಗೋಡೆಗಳಿಗೆ ಆಗರುವ ಕಲೆಗಳನ್ನು ತೆಗೆಯಲು ಬೇಸಿಕ್-ಎಚ್ 2 ವಿಧಾನವನ್ನು ಬಳಸಬಹುದು. ಹತ್ತಿ ಬಟ್ಟೆಗೆ ಇದನ್ನು ಹಾಕಿ ನಯವಾಗಿ ಗೋಡೆಯನ್ನು ಉಜ್ಜಿದರೆ ಕಲೆ ನಿವಾರಣೆಯಾಗುತ್ತದೆ.
ಬ್ಲೋ ಡ್ರೈಯರ್
ಗೋಡೆಯ ಮೇಲೆ ಇರುವ ಕ್ರಯಾನ್ಸ್ ಕಲೆಯನ್ನು ಸ್ವಚ್ಛಗೊಳಿಸಲು ಬ್ಲೋ ಡ್ರೈಯರ್ ಅತ್ಯುತ್ತಮ ವಿಧಾನ. ಗೋಡೆಯ ಮೇಲಿರುವ ಬಳಪದ ಮೇಣವನ್ನು ಬ್ಲೋ ಡ್ರೈಯರ್ ಮೂಲಕ ಬಿಸಿಯಾಗಿಸಿ ನಂತರ ಆರ್ದ್ರ ಮತ್ತು ತೊಳೆಯುವ ಬಟ್ಟೆಯಿಂದ ಗೋಡೆಗಳಿಂದ ಮೇಣದಂಥ ಕ್ರಯಾನ್ಸ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.
ಟೂತ್ಪೇಸ್ಟ್ಟೂತ್ಪೇಸ್ಟ್ ಗೋಡೆಯನ್ನು ಸ್ವಚ್ಛಗೊಳಿಸುವ ಅತ್ಯುತ್ತಮ ವಸ್ತುವಾಗಿದೆ. ಟೂತ್ಪೇಸ್ಟ್ ಗೋಡೆಯ ಮೇಲಿನ ಕಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವಷ್ಟು ಪರಿಣಾಮಕಾರಿ ಅಲ್ಲ. ಆದರೂ ಇದು ಗೋಡೆಯ ಬಣ್ಣವನ್ನು ಕನಿಷ್ಠ ಬಿಳಿಯಾಗಿಸುತ್ತದೆ, ಮನೆಯಲ್ಲೇ ಇರುವ ವಸ್ತುವಿನ ಮೂಲಕ ಸ್ವಲ್ಪ ಮಟ್ಟಿಗೆ ಕಲೆಯನ್ನು ನಿವಾರಿಸಬಹುದು.